ಹೋಮ್ ಸ್ಕೂಲಿಂಗ್ ಇತರೆ ಅನುಕೂಲಗಳು
ಹೋಮ್ ಸ್ಕೂಲಿಂಗ್ ತ್ರಾಸದಾಯಕವಾದರೂ, ಕೆಲವೊಮ್ಮೆ ಫಲಪ್ರದ ಕೂಡ. ಮಕ್ಕಳೊಂದಿಗೆ ಕಿಂಚಿತ್ ಸಮಯ ಕಳೆಯಲು ಸಿದ್ದರಿಲ್ಲದ ಪಾಲಕರಿಗೆ ಹೋಮ್ ಸ್ಕೂಲಿಂಗ್ ನಿಜಕ್ಕೂ ಅಪಾಯಕಾರಿ. ಪಾಲಕರಿಗಲ್ಲ, ಮಕ್ಕಳ ಭವಿಷ್ಯಕ್ಕೆ.
ಮಕ್ಕಳಿಗೆ ಓದುವ ರುಚಿ ಹೆಚ್ಚಿಸುವುದು ಹೇಗೆ? ಇಲ್ಲಿವೆ ಸುಲಭ ಮಾರ್ಗಗಳು..
ಅಧ್ಯಯನ ಕುರಿತ ವರದಿ
ಹೋಮ್ ಸ್ಕೂಲಿಂಗ್ ಕುರಿತಂತೆ ನಡೆದಿರುವ ಅಧ್ಯಯನದತ್ತ ಗಮನ ಹರಿಸಿದಾಗ, 2012ರಲ್ಲಿ ಸುಮಾರು 1.77 ಮಿಲಿಯನ್ ಮಕ್ಕಳು ಹೋಮ್ ಸ್ಕೂಲಿಂಗ್ ಕಲಿಕೆಯನ್ನು ಅಪ್ಪಿಕೊಂಡರು. ಬಳಿಕ ಪ್ರತಿ ವರ್ಷ ಇದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಭಾರತೀಯ ಪದವೀಧರರಿಗೆ ಇರುವ ಟಾಪ್ 6 ಫೆಲೋಶಿಪ್ಗಳಿವು..
ಅಧ್ಯಯನ ಕುರಿತ ವರದಿ
ಹೋಮ್ ಸ್ಕೂಲಿಂಗ್ ಪದ್ದತಿ ಜಾರಿಗೆ ಬರಲು ಕಾರಣಗಳತ್ತ ಗಮನಹರಿಸಿದರೆ, ಸರ್ಕಾರದ ನೀತಿಗಳು ಹಾಗೂ ಸರ್ಕಾರಿ ನೌಕರಿಯಲ್ಲಿರುವ ಪಾಲಕರು ಆಗಾಗ್ಗೆ ಟ್ರಾನ್ಸ್ ಫರ್ ಆಗುತ್ತ ಬೇರೆ ಬೇರೆ ಸ್ಥಳಗಳಿಗೆ ತೆರಳುವುದು ಹೆಚ್ಚಿ, ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿತು. ಈ ನಿಟ್ಟಿನಲ್ಲಿ, ಮಕ್ಕಳು ಆಗಾಗ್ಗೆ ಬೇರೆ ಬೇರೆ ಶೈಕ್ಷಣಿಕ ವಾತಾವರಣಕ್ಕೆ ಹೊಂದಿಕೊಳ್ಳುವುದನ್ನು ತಪ್ಪಿಸಬಹುದು.
ಯಶಸ್ವಿ ವಿದ್ಯಾರ್ಥಿಗಳ ಅಧ್ಯಯನ ಕ್ರಮಗಳು ಹೇಗಿರುತ್ತವೆ ಗೊತ್ತೇ?
ಹೋಮ್ ಸ್ಕೂಲಿಂಗ್ ಟ್ರೆಂಡಿಂಗ್
ಹೋಂಸ್ಕೂಲಿಂಗ್ ಸದ್ಯದ ಟ್ರೆಂಡ್ ಆಗಿದೆ. ಬೇಕಾದ ವಿಷಯವನ್ನು ಕಲಿಯಲು ಅವಕಾಶವಿದೆ. ಹಾಗೂ ಕಷ್ಟದ ವಿಷಯಗಳನ್ನು ಕಲಿಯಲು ಹೆಚ್ಚು ಸಮಯ ಮೀಸಲಿಡಬಹುದು.
ಇದರಿಂದ ತನ್ನ
Classmate ಗಳೊಂದಿಗೆ ಅನಗತ್ಯವಾಗಿ ಸಮಯ ಕಳೆಯುವ ಅನಿವಾರ್ಯತೆ ಇರುವುದಿಲ್ಲ. ಬೇರೆ Classmate ಗಳು ಕಲಿಕೆಯಲ್ಲಿ Fast ಇದ್ದರೆ, ಕಲಿಕೆಯಲ್ಲಿ ಹಿಂದಿರುವ ಮಕ್ಕಳಲ್ಲಿ ಅಭದ್ರತೆ ಉಂಟಾಗುವ ಸಾಧ್ಯತೆಯಿಲ್ಲ. ಶಾಲೆಯಲ್ಲಿ ಕಲಿಸದ ಕೆಲವು ವಿಷಯಗಳನ್ನು ಪಾಲಕರು ಕಲಿಸಬಹುದು. ಅದು ಮಕ್ಕಳ ಫೇವರೇಟ್ ಕೂಡ ಆಗಿದ್ದರೆ ಉತ್ತಮ. ಅದರಲ್ಲೂ, ಕಲಿಕೆಯಲ್ಲಿ ಸೀಮಿತತೆ ಇಲ್ಲ. ವಯಸ್ಸು ಕೂಡ ಅಡ್ಡಿಯಲ್ಲ.
No comments:
Post a Comment
rudramunitm46@gmail.com