ಹೋಮ್‌ ಸ್ಕೂಲಿಂಗ್‌ನಲ್ಲಿ ಕೆಲವೊಮ್ಮೆ ಅನಗತ್ಯ ವಿಚಾರಗಳು ಸಮಸ್ಯೆಗೆ ಎಡೆ

 

ಹೋಮ್ಸ್ಕೂಲಿಂಗ್ನಲ್ಲಿ ಕೆಲವೊಮ್ಮೆ ಅನಗತ್ಯ ವಿಚಾರಗಳು  ಸಮಸ್ಯೆಗೆ ಎಡೆ

- ಇಡೀ ದಿನ ಮಕ್ಕಳತ್ತ ನಿಗಾ ವಹಿಸಬೇಕಾಗುತ್ತದೆ. ಮಕ್ಕಳು ದುರ್ವರ್ತನೆ ತೋರಿದರೆ ದಂಡಿಸುವುದು ಕಷ್ಟ.

- ಮಕ್ಕಳು ಆಗಾಗ್ಗೆ ಹೋಸ್ಕೂಲಿಂಗ್ ಬಗ್ಗೆ ವಿಚಾರಿಸಿದರೆ, ಪದೇ ಪದೆ ಉತ್ತರಿಸಬೇಕಾಗುತ್ತದೆ. ವಿಚಾರದಲ್ಲಿ ಗೊಂದಲ ಸೃಷ್ಟಿಯಾದರೆ, ಪಾಲಕರಲ್ಲಿ ನೆಗೆಟಿವ್ ತುಂಬಲು ಆರಂಭವಾಗುವುದು. ಇದು ತಮ್ಮ ತಮ್ಮ ನಿರ್ಧಾರದ ಕುರಿತು ಮತ್ತೊಮ್ಮೆ ಆಲೋಚಿಸುವಂತೆ ಮಾಡುವುದು.

- ಕಲಿಕೆಯಲ್ಲಿ ಮಕ್ಕಳು ಕಷ್ಟ ಪಡುವಾಗ, ಪಾಲಕರು ಭಾರೀ ತಾಳ್ಮೆ ಮತ್ತು ಸಿಟ್ಟನ್ನು ನಿಯಂತ್ರಿಸುವ ಅನಿವಾರ್ಯತೆ ಎದುರಾಗುತ್ತದೆ.

ಮಕ್ಕಳ ನಿಯಂತ್ರಣದಲ್ಲಿ ಪರಿಣಾಮಕಾರಿ ಸಾಧ್ಯವೇ..

- ಶಾಲೆಯಲ್ಲಿ ಶಿಕ್ಷಕರು ಮಕ್ಕಳನ್ನು ನಿಭಾಯಿಸುವ ಪರಿಯನ್ನು, ಪಾಲಕರು ಪರಿಣಾಮಕಾರಿಯಾಗಿ ಅನುಸರಿಸುವುದು ಕಷ್ಟ.

- ಮಕ್ಕಳ ಪುಸ್ತಕ ಹಾಗೂ ಕಲಿಕೆಯ ಸಾಧನಕ್ಕಾಗಿ ಪಾಲಕರು ಅಂದುಕೊಂಡದ್ದಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.

- ಶಿಕ್ಷಕರ ದಕ್ಷತೆಯನ್ನು ಪಾಲಕರು ಅನುಸರಿಸುವಲ್ಲಿ ಸ್ಥಿರತೆ ಮುಖ್ಯ.

- ಮಕ್ಕಳನ್ನು ಒಂದೇ ತೆರನಾಗಿ ಪ್ರೋತ್ಸಾಹಿಸುವುದು ಸುಲಭವಲ್ಲ.

- ಮಕ್ಕಳ ಅಭಿರುಚಿಗೆ ತಕ್ಕಂತೆ ಕಾರ್ಯ ಚಟುವಟಿಕೆಯನ್ನು ಪಟ್ಟಿ ಮಾಡಬೇಕು. ಇದು ಮಕ್ಕಳ ಕಲಿಕೆಯ ಆಸಕ್ತಿಗೆ ಇನ್ನಷ್ಟು ಉತ್ತೇಜನ ನೀಡುವಂತಿರಬೇಕು.

ಪಠ್ಯೇತರ ಚಟುವಟಿಕೆಗಳು

 

ಕೆಲವೊಂದು ಸಂದರ್ಭಗಳಲ್ಲಿ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದಾಗ, ಅವರದ್ದೇ ವಯೋಮಾನದ ಮಕ್ಕಳೊಂದಿಗೆ ಆಡಿಸಬೇಕು. ಹೋಮ್ಸ್ಕೂಲಿಂಗ್ನಲ್ಲಿ ಇದು ಸುಲಭವಲ್ಲ. ಹೊಸತನದಿಂದ ಕೂಡಿದ್ದರೂ, ಹಿಂದಿನಿಂದಲೂ ಬಂದಿರುವ ಗುರುಕುಲ ಪದ್ದತಿ, ಶಾಲೆಗೆ ಹೋಗಿ ಕಲಿಯುವ ಪದ್ದತಿಗೆ ಸಂಪೂರ್ಣ ವಿರುದ್ದವಾಗಿರಲಿದೆ. ಶಾಲೆಗೆ ಹೋಗುವ ಮಕ್ಕಳೊಂದಿಗೆ ಈಗಿನ ಪಾಲಕರು Time Spend ಮಾಡುವುದು ಅಪರೂಪ. ಹೀಗಿರುವಾಗ, ಕೆಲವರಲ್ಲಿ ನೆಗೆಟಿವ್ ಭಾವನೆ ಮೂಡುವುದರಲ್ಲಿ ಹೊಸತನವಿಲ್ಲ.

No comments:

Post a Comment

rudramunitm46@gmail.com